Untitled Document
Sign Up | Login    
Dynamic website and Portals
  

Related News

ಇಸ್ಲಾಮ್ ಪರ ರ್ಯಾಲಿ ನಡೆಸಲು ಮುಸ್ಲಿಮ್ ಮೌಲ್ವಿ ಮಹಮೂದ್ ಮದನಿಗೆ ಫತ್ವಾ

'ಇಸ್ಲಾಮ್' ನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಬೃಹತ್ ರ್ಯಾಲಿ ನಡೆಸಬೇಕೆಂದು ದಾರುಲ್ ಉಲೂಮ್ ಸಂಘಟನೆ ಪ್ರಮುಖ ಮುಸ್ಲಿಮ್ ಮೌಲ್ವಿ, ಮಾಜಿ ಸಂಸದ ಮಹಮೂದ್ ಮದನಿಗೆ ಫತ್ವಾ ಹೊರಡಿಸಿದೆ. ಜಮೀಯತ್ ಉಲೆಮ-ಇ-ಹಿಂದ್ ಸಂಘಟನೆಯ ಮುಖ್ಯಸ್ಥರಾಗಿರುವ ಮಹಮೂದ್ ಮದನಿಗೆ ದೇಶಾದ್ಯಂತ ಹಿಂಬಾಲಕರಿದ್ದು, ನರೇಂದ್ರ ಮೋದಿ ಆಡಳಿತದಲ್ಲಿ...

ಮತಾಂತರ ನಿಷೇಧ ಕಾಯ್ದೆ ರಾಜ್ಯಗಳಿಗೆ ಸಂಬಂಧಿಸಿದ ವಿಷಯ: ಕಾನೂನು ಸಚಿವಾಲಯ

ಕೇಂದ್ರ ಸರ್ಕಾರ 'ಮತಾಂತರ ನಿಷೇಧ ಕಾಯ್ದೆ'ಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನು ಸಚಿವಾಲಯ ಹೇಳಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ವಿಷಯ ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಕಾಯ್ದೆ ಜಾರಿಗೊಳಿಸಲು ಸಾದ್ಯವಿಲ್ಲ ಎಂದು ಕಾನೂನು...

ಅಂಬೇಡ್ಕರ್ ಘರ್ ವಾಪಸಿಯನ್ನು ಬೆಂಬಲಿಸಿದ್ದರು: ಆರ್.ಎಸ್.ಎಸ್

ಏ.14ರಂದು ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಆರ್.ಎಸ್.ಎಸ್ ನ ಆರ್ಗನೈಜರ್ ಪಾಂಚಜನ್ಯ ಪತ್ರಿಕೆಗಳು, ಅಂಬೇಡ್ಕರ್ ಅವರ ಬಗ್ಗೆ ವಿಶೇಷ ಸಂಚಿಕೆಗಳನ್ನು ಹೊರತರುತ್ತಿವೆ. ಅಂಬೇಡ್ಕರ್ ಅವರು ಘರ್ ವಾಪಸಿ ಪರವಾಗಿದ್ದರು ಎಂದು ಈ ಸಂಚಿಕೆಯಲ್ಲಿ ಆರ್.ಎಸ್.ಎಸ್ ಹೇಳಿದೆ. ಆರ್.ಎಸ್.ಎಸ್ ನ ಜಂಟಿ...

ಮತಾಂತರ, ಅದರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆಯಲಿ: ರಾಜನಾಥ್ ಸಿಂಗ್

ಅಲ್ಪಸಂಖ್ಯಾತರಿಗೆ ಸಂಪೂರ್ಣ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಮತಾಂತರ ನಡೆಸುವುದನ್ನು ಪ್ರಶ್ನಿಸಿದ್ದು, ಈ ಬಗ್ಗೆ ಚರ್ಚೆ ನಡೆಯಲಿ ಎಂದು ಹೇಳಿದ್ದಾರೆ. ನವದೆಹಲಿಯಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ್ ಸಿಂಗ್, ಮತಾಂತರ...

ಸಂಸತ್ ಬಜೆಟ್ ಅಧಿವೇಶನ ಇಂದಿನಿಂದ ಆರಂಭ

ಸಂಸತ್‌ ನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ವಾಗ್ದಾಳಿಗೆ ವಿಪಕ್ಷಗಳು ಸಜ್ಜಾಗಿವೆ. ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ 6 ಕಾನೂನುಗಳಿಗೆ ವಿಧೇಯಕದ ರೂಪ ನೀಡುವ ಸವಾಲು ಸಹ ಸರ್ಕಾರದ ಮುಂದಿದೆ. ವಿವಾದಾಸ್ಪದ ಘರ್ ವಾಪಸಿ, ಸಂಘ...

ಘರ್ ವಾಪಸಿ ಮತಾಂತರವಾಗುವುದಿಲ್ಲ: ಪ್ರವೀಣ್ ತೊಗಾಡಿಯಾ

ಅನ್ಯಧರ್ಮೀಯರನ್ನು ಮಾತೃಧರ್ಮಕ್ಕೆ ವಾಪಸ್ ಕರೆತರುವ ಘರ್ ವಾಪಸಿ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿರುವ ವಿ.ಹೆಚ್.ಪಿ ಮುಖಂಡ ಪ್ರವೀಣ್ ತೊಗಾಡಿಯಾ, ದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ. ನವದೆಹಲಿಯಲ್ಲಿ ನಡೆದ ವಿ.ಹೆಚ್.ಪಿ ಸಭೆ ಬಳಿಕ ಮಾತನಾಡಿದ ತೊಗಾಡಿಯಾ, ನಾವು ಮತಾಂತರವನ್ನು ವಿರೋಧಿಸುತ್ತೇವೆ....

ಕೇರಳದಲ್ಲಿ ಘರ್‌ ವಾಪಸಿ ಮುಂದುವರೆಸಲು ವಿಎಚ್‌ಪಿ ನಿರ್ಧಾರ

ಈ ಹಿಂದೆ ಅನ್ಯಧರ್ಮಗಳಿಗೆ ಮತಾಂತರಗೊಂಡು ಈಗ ಹಿಂದು ಧರ್ಮಕ್ಕೆ ಮರಳಲು ಇಚ್ಛಿಸಿರುವವರಿಗಾಗಿ ಹಮ್ಮಿಕೊಂಡಿರುವ 'ಘರ್‌ ವಾಪಸಿ' ಕಾರ್ಯಕ್ರಮ ಮುಂದವರಿಸಲು ವಿಶ್ವಹಿಂದು ಪರಿಷತ್‌ ತೀರ್ಮಾನಿಸಿದೆ. ಈ ಪ್ರಕ್ರಿಯೆಯಡಿಯಲ್ಲಿ ಮಾತೃಧರ್ಮಕ್ಕೆ ಮರಳಲಿಚ್ಛಿಸುವವರಿಗೆ ನೆರವು ನೀಡಲಾಗುತ್ತಿದ್ದು ಯಾವುದೇ ಬಲವಂತ, ಒತ್ತಡ ಅಥವಾ ಆಮಿಷಗಳನ್ನೊಡ್ಡಿ ಮರು ಮತಾಂತರ...

ಬಿಹಾರದಲ್ಲಿ 40 ದಲಿತ ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ

'ಘರ್ ವಾಪಸಿ' ಕಾರ್ಯಕ್ರಮ ನಡೆದಾಗಿನಿಂದಲೂ ದೇಶದಲ್ಲಿ ಮತಾಂತರ ರಾಜಾರೋಷವಾಗಿ ನಡೆಯುತ್ತಿದೆ. ಬಿಹಾರದ ಬೋಧ್ ಗಯಾದಲ್ಲಿ ಸುಮಾರು 40 ದಲಿತ ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಬಡತನದಿಂದ ಹೊರಬರಲು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದಾಗಿ ದಲಿತ ಕುಟುಂಬಗಳು ತಿಳಿಸಿವೆ. ಮತಾಂತರ ಕುರಿತು ಬಿಹಾರಿ...

ಭಾರತ ಹಿಂದೂ ರಾಷ್ಟ್ರವೆಂಬ ಭಾಗವತ್ ಹೇಳಿಕೆಗೆ ಸಂಸತ್ ನಲ್ಲಿ ಪ್ರತಿಭಟನೆ

ಡಿ.22ರ ಸಂಸತ್ ಕಲಾಪದಲ್ಲಿ ವಿರೋಧ ಪಕ್ಷಗಳು ಕೋಲಾಹಲವೆಬ್ಬಿಸಿದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪವನ್ನು ಮಧ್ಯಾಹ್ನದ ವರೆಗೆ ಮುಂದೂಡಲಾಗಿದೆ. ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್, ಮರುಮತಾಂತರವನ್ನು ಸಮರ್ಥಿಸಿ ನೀಡಿದ್ದ ಹೇಳಿಕೆಯನ್ನು ಖಂಡಿಸಿರುವ ವಿರೋಧಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್, ತೃಣ ಮೂಲ...

ಘರ್ ವಾಪಸಿ ಬಗ್ಗೆ ತನಿಖೆಗೆ ಆದೇಶಿಸಿದ ಕೇರಳ ಸರ್ಕಾರ

ದೇಶಾದ್ಯಂತ ಮತಾಂತರದ ವಿಷಯ ದಿನದಿಂದ ದಿನಕ್ಕೆ ವ್ಯಾಪಕ ಚರ್ಚೆಯಾಗುತ್ತಿದ್ದು ಕೇರಳಕ್ಕೂ ಮತಾಂತರದ ಬಿಸಿ ತಟ್ಟಿದೆ. ಕೇರಳದ ಆಲಪ್ಪುಳಂ ಮತ್ತು ಕೊಲ್ಲಂ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮದ 30ಅನುಯಾಯಿಗಳು ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡಿರುವುದರ ಬಗ್ಗೆ ಅಲ್ಲಿನ ಸರ್ಕಾರ ತನಿಖೆಗೆ ಆದೇಶಿಸಿದೆ. ಘರ್ ವಾಪಸಿ...

ಗುಜರಾತ್ ನಲ್ಲಿಯೂ ಘರ್ ವಾಪಸಿ ಮೂಲಕ 225 ಕ್ರಿಶ್ಚಿಯನ್ನರು ಹಿಂದೂ ಧರ್ಮಕ್ಕೆ ವಾಪಸ್

'ಉತ್ತರ ಪ್ರದೇಶ'ದಲ್ಲಿ ಘರ್ ವಾಪಸಿ ಮೂಲಕ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತಂದಿದ್ದ ವಿಶ್ವಹಿಂದೂ ಪರಿಷತ್, ಈಗ ಪ್ರಧಾನಿ ಮೋದಿ ರಾಜ್ಯವಾದ ಗುಜರಾತ್ ನಲ್ಲೂ 225 ಬುಡಕಟ್ಟು ಕ್ರಿಶ್ಚಿಯನ್ ರನ್ನು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಲಾಗಿದೆ ಎಂದು ಹೇಳಿದೆ. ಬುಡಕಟ್ಟು ಕ್ರಿಶ್ಚಿಯನ್...

ಮತಾಂತರ ನಿಷೇಧ ಕಾಯ್ದೆಗೆ ಸೆಕ್ಯುಲರ್ ಪಕ್ಷಗಳು ಬೆಂಬಲಿಸಲಿ: ಅಮಿತ್ ಶಾ

ಒತ್ತಾಯ ಪೂರ್ವಕ ಮತಾಂತರವನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಬಲವಂತದ ಮತಾಂತರಕ್ಕೆ ಬಿಜೆಪಿಯ ವಿರೋಧವಿದ್ದು, ನಿಜವಾದ ಜಾತ್ಯಾತೀತತೆಯನ್ನು ಪ್ರತಿಪಾದಿಸುವ ಭಾರತದ ಎಲ್ಲಾ ಪಕ್ಷಗಳು ಮತಾಂತರ ನಿಷೇಧ ಕಾಯ್ದೆಯನ್ನು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ. ...

ಘರ್ ವಾಪಸಿ ಮೂಲಕ ದಾರಿ ತಪ್ಪಿದವರನ್ನು ವಾಪಸ್ ಕರೆತರಲಾಗುತ್ತಿದೆ: ಮೋಹನ್ ಭಾಗವತ್

'ಉತ್ತರ ಪ್ರದೇಶ'ದಲ್ಲಿ ಇತ್ತೀಚೆಗಷ್ಟೆ ನಡೆದಿದ್ದ ಘರ್ ವಾಪಸಿ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿರುವ ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್, ಭಾರತ ಹಿಂದೂ ರಾಷ್ಟ್ರ ಇಲ್ಲಿರುವ ಹಿಂದೂಗಳು ಇಲ್ಲೇ ಹುಟ್ಟಿ ಬದುಕುತ್ತಿದ್ದಾರೆ ಅವರು ಎಲ್ಲಿಂದಲೋ ಬಂದವರಲ್ಲ ಎಂದು ಹೇಳಿದ್ದಾರೆ. ಕೋಲ್ಕತ್ತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್...

ಘರ್ ವಾಪಸಿ ಶಾಂತಿಗೆ ಮಾರಕ, ಮತಾಂತರ ನಿಷೇಧ ಕಾಯ್ದೆ ಮಾತ್ರ ಬೇಡ: ದೆಹಲಿ ಬಿಷಪ್

'ಆರ್.ಎಸ್.ಎಸ್' ನ ಘರ್ ವಾಪಸಿ ಬಗ್ಗೆ ದೆಹಲಿಯ ಪ್ರಧಾನ ಬಿಷಪ್ ಪ್ರತಿಕ್ರಿಯಿಸಿದ್ದು ಉತ್ತರ ಪ್ರದೇಶದಲ್ಲಿ ನಡೆದಿರುವ ಮಾತೃಧರ್ಮಕ್ಕೆ ವಾಪಸ್ಸಾಗುವ ಕಾರ್ಯಕ್ರಮ ಶಾಂತಿ, ಸೌಹಾರ್ದತೆಗೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮತಾಂತರ ನಿಷೇಧ ಕಾಯ್ದೆಗೆ ಕ್ರಿಶ್ಚಿಯನ್ ಸಮುದಾಯ ವಿರುದ್ಧವಾಗಿದೆ ಎಂದು ಬಿಷಪ್ ತಿಳಿಸಿದ್ದಾರೆ....

ಡಿ.25ರಂದು ನಡೆಯಬೇಕಿದ್ದ ಘರ್ ವಾಪಸಿ ಕಾರ್ಯಕ್ರಮ ರದ್ದು

ಪಶ್ಚಿಮ ಉತ್ತರ ಪ್ರದೇಶದಲ್ಲಿ ಧರ್ಮ ಜಾಗರಣ ಸಮಿತಿ ಡಿ.25ರಂದು ನಡೆಸಲು ಉದ್ದೇಶಿಸಲಾಗಿದ್ದ ಸಾಮೂಹಿಕ ಮರು ಮತಾಂತರ ಕಾರ್ಯಕ್ರಮವನ್ನು ನಡೆಸದೇ ಇರಲು ತೀರ್ಮಾನಿಸಿದೆ. ಈ ಬಗ್ಗೆ ಪಿಟಿಐ ಗೆ ಸ್ಪಷ್ಟನೆ ನೀಡಿರುವ ಧರ್ಮ ಜಾಗರಣ ಸಮಿತಿ ಮುಖ್ಯಸ್ಥ, ಡಿ.25ರಂದು ನಡೆಸಬೇಕಿದ್ದ ಘರ್ ವಾಪಸಿ...

ಹಿಂದೂ ಧರ್ಮಕ್ಕೆ ಮರುಮತಾಂತರ: ಉತ್ತರ ಪ್ರದೇಶ ಪೊಲೀಸರಿಂದ ಓರ್ವನ ಬಂಧನ

'ಉತ್ತರ ಪ್ರದೇಶ'ದಲ್ಲಿ ಘರ್ ವಾಪಸಿ ಕಾರ್ಯಕ್ರಮದ ಮೂಲಕ 57 ಮುಸ್ಲಿಂ ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಂದಕಿಶೋರ್ ವಾಲ್ಮೀಕಿ ಎಂಬುವವರನ್ನು ಬಂಧಿಸಿದ್ದಾರೆ. ಡಿ.16ರಂದು ಬಂಧಿಸಲಾಗಿರುವ ನಂದಕಿಶೋರ್ ವಿರುದ್ಧ ಒತ್ತಾಯಪೂರ್ವಕ ಮತಾಂತರ ನಡೆಸಿರುವ ಆರೋಪವಿದ್ದು ಎಫ್.ಐ.ಆರ್ ದಾಖಲಿಸಲಾಗಿದೆ....

ಸೋನಿಯಾ ಗಾಂಧಿ ಕ್ಷೇತ್ರದಲ್ಲಿ ಘರ್ ವಾಪಸಿ ಕಾರ್ಯಕ್ರಮ ನಡೆಸಲಿರುವ ವಿಶ್ವಹಿಂದೂ ಪರಿಷತ್

'ಹಿಂದೂ ಧರ್ಮ'ದಿಂದ ಅನ್ಯ ಧರ್ಮಕ್ಕೆ ಮತಾಂತರವಾಗಿದ್ದವರನ್ನು ವಾಪಸ್ ಕರೆತರುವ ಘರ್ ವಾಪಸಿ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಿಂದ ತೀವ್ರ ವಿರೋಧವಾಗುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲೇ ಘರ್ ವಾಪಸಿ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ರಾಯ್...

57 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರ: ಸಂಸತ್ ನಲ್ಲಿ ವಿಪಕ್ಷಗಳಿಂದ ಗದ್ದಲ

'ಉತ್ತರ ಪ್ರದೇಶ'ದ ಆಗ್ರಾದಲ್ಲಿ ಘರ್ ವಾಪಸಿ ಕಾರ್ಯಕ್ರಮದ ಮೂಲಕ 57 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್ಸಾಗಿರುವುದನ್ನು ವಿರೋಧಿಸಿ ಸಂಸತ್ ನಲ್ಲಿ ಪ್ರತಿಪಕ್ಷಗಳು ಗದ್ದಲ ಉಂಟುಮಾಡಿವೆ. ಮುಸ್ಲಿಮರು ಸಾಮೂಹಿಕವಾಗಿ ಹಿಂದೂ ಧರ್ಮಕ್ಕೆ ವಾಪಸ್ಸಾಗಿರುವುದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಪ್ರತಿಪಕ್ಷಗಳ...

ಆಗ್ರಾದಲ್ಲಿ 57 ಮುಸ್ಲಿಂ ಕುಟುಂಬದವರು ಹಿಂದೂ ಧರ್ಮಕ್ಕೆ ವಾಪಸ್

'ಉತ್ತರ ಪ್ರದೇಶ'ದ ಆಗ್ರಾದಲ್ಲಿ ಸುಮಾರು 57ಕ್ಕೂ ಹೆಚ್ಚು ಮುಸ್ಲಿಂ ಕುಟುಂಬದವರು ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ. ಆರ್.ಎಸ್.ಎಸ್ ಹಾಗೂ ಭಜರಂಗದಳ ಹಮ್ಮಿಕೊಂಡಿದ್ದ ಘರ್ ವಾಪಸಿ ಕಾರ್ಯಕ್ರಮದಲ್ಲಿ 57 ಕುಟುಂಬದ 200 ಮುಸ್ಲಿಮರು ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆರ್.ಎಸ್.ಎಸ್ ನ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited